Saturday, April 30, 2011

ಬಾದಾಮಿ, ಐಹೊಳೆ, ಪಟ್ಟದಕಲ್ಲು

ಎಪ್ರಿಲ್ ೧೬-೧೮ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಬೆಳಗಾವಿಗೆ ಹೋಗಿ ಬಂದೆ. ಅಲ್ಲಿ ಕಂಡ ಒಂದಷ್ಟು ತುಣುಕುಗಳು..


ಪಟ್ಟದಕಲ್ಲು

ವಿರೂಪಾಕ್ಷ ದೇವಸ್ಥಾನ, ಪಟ್ಟದಕಲ್ಲು


ಗಳಗನಾಥ ದೇವಸ್ಥಾನ, ಪಟ್ಟದಕಲ್ಲು 

ವಿರೂಪಾಕ್ಷ ದೇವಸ್ಥಾನದ ಒಳಗೆ..

ತೀರದ ದಾಹ!

ಪಟ್ಟದಕಲ್ಲು ದೇವಾಲಯಗಳ ಸಮುಚ್ಚಯ, UNESCO World Heritage Site

ದುರ್ಗಾ ದೇವಾಲಯ, ಐಹೊಳೆ


ಯಾತ್ರಿಗೆ ಕೊಂಚ ವಿಶ್ರಾಂತಿ ಬೇಡವೇ?

ಮಹಿಷ ಮರ್ದಿನೀ, ದುರ್ಗಾ ದೇವಾಲಯ , ಐಹೊಳೆ 

ಮಹಿಷ ಮರ್ದಿನೀ, ದುರ್ಗಾ ದೇವಾಲಯ , ಐಹೊಳೆ 

ಬಸಮ್ಮ, ದೇವಾಲಯದಲ್ಲಿ ಕಾರ್ಯ ನಿರ್ವಹಿಸುವಾಕೆ! 
ಬಸಮ್ಮ: ಬರ್ರೀ ಯಪ್ಪಾ, ಯಾವೂರ್ರೀ? ಹೆಂಗೈತ್ರೀ ನಮ್ ಐಹೋಳಿ?
ನಾನು: ಚೆನ್ನಾಗಿದೆ..ನಿಮಗೆಲ್ಲ ಸರ್ಕಾರ ಬೇರೆ ಕಡೆ ಜಾಗ ಕೊಡಂಗಿಲ್ಲೇನು? 
ಬಸಮ್ಮ: ಊರು ಬಿಟ್ಟು ಬ್ಯಾರೀ ಕಡಿ ಹೊಕ್ಕಳ್ರಿ ಅಂದ್ರೆ ಯಾರ್ ಹೊಕ್ಕಾರ್ರೀ ಯಪ್ಪಾ? ಐಹೋಳಿ ಬಿಟ್ಟ ನಾವ್ ಎಲ್ಲೂ ಹೋಗಂಗಿಲ್ಲ..


ಎಲ್ಲೂ ಕಾಣೆಲ್ಲೂ ಕಾಣೆ..ಯೆಲ್ಲಮ್ಮನಂಥ ದೇವಿಯನೆಲ್ಲೂ ಕಾಣೆ...
ಚೊಳಚಗುಡ್ಡದ ಬನಶಂಕರೀ ಅಮ್ಮನವರ ಸನ್ನಿಧಿಯಲ್ಲಿನ ಜೋಗತಿ!

ಬದುಕು!

ಹೌದೇನsss ಯವ್ವಾ??
ಕುಶಲೋಪರಿ..

ಗತ್ತು ಗಮ್ಮತ್ತು!

ಏನ್ ಜನ ಅಪ್ಪ ಇವ್ರು.. ನೆಟ್ಟಗ್ ನಿಲ್ಲೋಕೂ ಬರಲ್ಲ ಒಂದ್ ಫೋಟೋಗೆ!

ನೀರೆ!

ಕರ್ತವ್ಯಂ ದೈವಮಾಹ್ನಿಕಂ!

ತೆರೆದಿದೆ ಮನೆ...ಓ ಬಾ..

ಕಾವಲು ಮಂಟಪ, ಬಾದಾಮಿ