Wednesday, April 17, 2013


ಚಳಿಗಾಲ ಮುಗಿದು ವಸಂತ ಋತು ಶುರುವಾಗಿದೆ. ಎಲ್ಲೆಲ್ಲೂ ಜೀವ ಮೊಳಕೆಯೊಡೆಯುತ್ತಿದೆ .
ನನ್ನ ಮನೆಯ ಹಿಂದಿನ "ವಾಬಾಶ್" ನದಿಯ ದಡದಲ್ಲಿ ಅನೇಕ ಹಕ್ಕಿಗಳು ವಾಸವಿದ್ದು ಈ ಗುಬ್ಬಿಯು ಗೂಡು ಕಟ್ಟಲು ಹೆಣಗುತ್ತಿದ್ದ ದೃಶ್ಯ ಹೀಗೆ ಮೂಡಿ ಬಂತು.
 

Tuesday, April 16, 2013

ಈ ಹೂವು ಈ ಹಕ್ಕಿ


ಈ ಬಾನು ಈ ಚುಕ್ಕಿ
ಈ ಹೂವು ಈ ಹಕ್ಕಿ
ತೇಲಿ ಸಾಗುವ ಮುಗಿಲು ಹರುಷ ಉಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ
ತುದಿ ಮೊದಲು ತಿಳಿಯದೀ ನೀಲಿಯಲಿ ...
-ಜಿ ಎಸ್ ಶಿವರುದ್ರಪ್ಪ

ಗುಬ್ಬಕ್ಕ


Saturday, April 30, 2011

ಬಾದಾಮಿ, ಐಹೊಳೆ, ಪಟ್ಟದಕಲ್ಲು

ಎಪ್ರಿಲ್ ೧೬-೧೮ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಬೆಳಗಾವಿಗೆ ಹೋಗಿ ಬಂದೆ. ಅಲ್ಲಿ ಕಂಡ ಒಂದಷ್ಟು ತುಣುಕುಗಳು..


ಪಟ್ಟದಕಲ್ಲು

ವಿರೂಪಾಕ್ಷ ದೇವಸ್ಥಾನ, ಪಟ್ಟದಕಲ್ಲು


ಗಳಗನಾಥ ದೇವಸ್ಥಾನ, ಪಟ್ಟದಕಲ್ಲು 

ವಿರೂಪಾಕ್ಷ ದೇವಸ್ಥಾನದ ಒಳಗೆ..

ತೀರದ ದಾಹ!

ಪಟ್ಟದಕಲ್ಲು ದೇವಾಲಯಗಳ ಸಮುಚ್ಚಯ, UNESCO World Heritage Site

ದುರ್ಗಾ ದೇವಾಲಯ, ಐಹೊಳೆ


ಯಾತ್ರಿಗೆ ಕೊಂಚ ವಿಶ್ರಾಂತಿ ಬೇಡವೇ?

ಮಹಿಷ ಮರ್ದಿನೀ, ದುರ್ಗಾ ದೇವಾಲಯ , ಐಹೊಳೆ 

ಮಹಿಷ ಮರ್ದಿನೀ, ದುರ್ಗಾ ದೇವಾಲಯ , ಐಹೊಳೆ 

ಬಸಮ್ಮ, ದೇವಾಲಯದಲ್ಲಿ ಕಾರ್ಯ ನಿರ್ವಹಿಸುವಾಕೆ! 
ಬಸಮ್ಮ: ಬರ್ರೀ ಯಪ್ಪಾ, ಯಾವೂರ್ರೀ? ಹೆಂಗೈತ್ರೀ ನಮ್ ಐಹೋಳಿ?
ನಾನು: ಚೆನ್ನಾಗಿದೆ..ನಿಮಗೆಲ್ಲ ಸರ್ಕಾರ ಬೇರೆ ಕಡೆ ಜಾಗ ಕೊಡಂಗಿಲ್ಲೇನು? 
ಬಸಮ್ಮ: ಊರು ಬಿಟ್ಟು ಬ್ಯಾರೀ ಕಡಿ ಹೊಕ್ಕಳ್ರಿ ಅಂದ್ರೆ ಯಾರ್ ಹೊಕ್ಕಾರ್ರೀ ಯಪ್ಪಾ? ಐಹೋಳಿ ಬಿಟ್ಟ ನಾವ್ ಎಲ್ಲೂ ಹೋಗಂಗಿಲ್ಲ..


ಎಲ್ಲೂ ಕಾಣೆಲ್ಲೂ ಕಾಣೆ..ಯೆಲ್ಲಮ್ಮನಂಥ ದೇವಿಯನೆಲ್ಲೂ ಕಾಣೆ...
ಚೊಳಚಗುಡ್ಡದ ಬನಶಂಕರೀ ಅಮ್ಮನವರ ಸನ್ನಿಧಿಯಲ್ಲಿನ ಜೋಗತಿ!

ಬದುಕು!

ಹೌದೇನsss ಯವ್ವಾ??
ಕುಶಲೋಪರಿ..

ಗತ್ತು ಗಮ್ಮತ್ತು!

ಏನ್ ಜನ ಅಪ್ಪ ಇವ್ರು.. ನೆಟ್ಟಗ್ ನಿಲ್ಲೋಕೂ ಬರಲ್ಲ ಒಂದ್ ಫೋಟೋಗೆ!

ನೀರೆ!

ಕರ್ತವ್ಯಂ ದೈವಮಾಹ್ನಿಕಂ!

ತೆರೆದಿದೆ ಮನೆ...ಓ ಬಾ..

ಕಾವಲು ಮಂಟಪ, ಬಾದಾಮಿ

Friday, January 28, 2011

ಸಾತೊಡ್ಡಿ ಜಲಪಾತ


ದೇಹಳ್ಳಿ ಅಂಚೆ, ಯೆಲ್ಲಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ.

ಐದಾರು ಸಣ್ಣ ತೊರೆಗಳು ಸೇರಿ ನಿರ್ಮಿಸಿರುವ ಸುಂದರ ತಡಸಲು..ಕೊಡಸಳ್ಳಿ ಜಲಾಶಯದಲ್ಲಿ ಮುಳುಗಡೆಯಾಗುವ ಭೀತಿಯನ್ನೆದುರಿಸುತ್ತಿರುವ ಈ ಜಲಪಾತಕ್ಕೆ ಮನಸೋಲದಿರುವವರು ಶುದ್ಧ ಅರಸಿಕರೇ ಸೈ!





Friday, July 30, 2010

ಚಾಮುಂಡಿ ಬೆಟ್ಟ..

ಚಾಮುಂಡಿ ಬೆಟ್ಟಕ್ಕೆ ದಿನಾ ಹೋಗೋ ಥ್ರಿಲ್ಲೇ ಬೇರೆ! :) ಪ್ರತೀ ದಿನಾ ಪ್ರತಿ ಆಯಾಮವೂ ಹೊಸತಾಗಿ ಕಾಣುತ್ತೆ. ಅಥವಾ ನೋಡ್ತೀವಿ ಅನ್ನೋದು ಸರಿ ಹೋಗುತ್ತೆ! 
ಆತ್ಮ-ಪರಮಾತ್ಮ
ಬೆಟ್ಟದ ಏಕಶಿಲಾ ನಂದಿ



ಅದೇ ದಾರಿ..
೯೫೦ ನೆ ಮೆಟ್ಟಿಲು



ಮೈಸೂರ ಮೇಲ್ ಮಂಜು!!



ಬೆಟ್ಟದ ಜೇಡ :p



ಜಾತಿಯೆಂಬ ಧರ್ಮಾಂಧತೆ!



ನಾನು ನೀನು ಜೋಡಿ!
ಚಾಮುಂಡಿ ಬೆಟ್ಟದ ಪೋಸ್ಟಾಫೀಸು!